ಮರುಕ್ರಿಯಾ ಸಾಮಸಾಮರ್ಥ್ಯ ಸಾಧನೆ -   
ರೋಗ, ಅಘಾತ ಇಲ್ಲವೆ ಶಸ್ತ್ರಕ್ರಿಯಾ ನಂತರ ಚೇತರಿಸಿಕೊಂಡಿದ್ದರೂ ದುರ್ಬಲನಾಗಿ ನಿಸ್ಸಹಾಯಕನಾಗಿರುವ ವ್ಯಕ್ತಿ ರೋಗಪೂರ್ವ ಸ್ಥಿತಿಗೆ ಮರಳುವುದಕ್ಕೆ ಸಾಧ್ಯವಾಗದಿರುವ ಸಂದರ್ಭಗಳಲ್ಲಿ, ಭೌತಿಕವಾಗಿ ಭಾವಾತ್ಮಕವಾಗಿ, ಸಾಮಾಜಿಕವಾಗಿ ಹಾಗೂ ದೇಹ ಕ್ರಿಯಾತ್ಮಕವಾಗಿ ಎಷ್ಟು ಔನ್ನತ್ಯ ಪಡೆಯಲು ಸಾಧ್ಯವೋ ಅಷ್ಟನ್ನೂ ಆದಷ್ಟು ಬೇಗ ಪಡೆಯುವಂತಾಗಿ ಸಮಾಜಕ್ಕೆ ಹೊರೆ ಆಗದಂತೆ ತನ್ನ ಯೋಗಕ್ಷೇಮವನ್ನು  ತಾನೇ ನೋಡಿಕೊಳ್ಳಲು ಸಮರ್ಥನಾಗುವಂತೆ ಮಾಡಲು ಏರ್ಪಡಿಸುವ ವಿಧಿ, ಸಾಧನೆ ಅಥವಾ ಕ್ರಮ (ರಿಹ್ಯಾಬಿಲಿಟೇಷನ್). ವೈಯಕ್ತಿಕ ಆರೋಗ್ಯದ ವಿಷಯದಲ್ಲಿ ಮೊದಲಾಗಿ ಸಾಧಿಸಬೇಕಾಗಿರುವುದು ರೋಗನಿವಾರಣೆ. ಇದನ್ನು ಸಾಧಿಸಿದ್ದರೂ ವ್ಯಕ್ತಿ ರೋಗಪೀಡಿತನಾದರೆ ಎರಡನೆಯ ಕ್ರಮವಾಗಿ ಔಷಧ ಇಲ್ಲವೆ ಶಸ್ತ್ರಚಿಕಿತ್ಸೆ ಒದಗಿಸ ಬೇಕಾಗುತ್ತದೆ. ರೋಗದಿಂದ ಚೇತರಿಸಿಕೊಂಡ ವ್ಯಕ್ತಿ ರೋಗಪೂರ್ವಸ್ಥಿತಿ ಪಡೆಯುವ ತನಕ ನಿಸ್ಸಹಾಯಕನಾಗಿರುವುದು ವ್ಯಕ್ತ. ನೈಸರ್ಗಿಕವಾಗಿಯೇ ರೋಗಪೂರ್ವಸ್ಥಿತಿಯನ್ನು ಪಡೆಯುವುದಕ್ಕೆ ಬಲುಕಾಲಬೇಕು. ಅಷ್ಟಾದರೂ ಅದರ ಸಾಫಲ್ಯ ಅನುಮಾನವಾಗಿದ್ದು ವ್ಯಕ್ತಿ ಸಮಾಜಕ್ಕೆ ಹೊರೆಯಾಗಿ ಬದುಕಬೇಕಾಗಬಹುದು. ಆದ್ದರಿಂದ ರೋಗಚಿಕಿತ್ಸಾ ನಂತರ ಮೂರನೆಯ ಕ್ರಮವಾಗಿ ವ್ಯಕ್ತಿಗೆ ಹಾಗೂ ವ್ಯಕ್ತಿಯ ಪರಿಸ್ಥಿತಿಗೆ ತಕ್ಕಂತೆ ವಿಶಿಷ್ಟಕಾರ್ಯ ಕ್ರಮರೂಪಿಸಿ ಆತ ಸಮಾಜಕ್ಕೆ ಭಾರವಾಗಿರದೆ ತನ್ನ ಆಗುಹೋಗುಗಳನ್ನು ತಾನೇ ಮಾಡಿಕೊಳ್ಳಲು ಸಮರ್ಥನಾಗುವಂತೆ ಮಾಡಬೇಕಾಗುತ್ತದೆ. ಇದೇ ಮರುಕ್ರಿಯಾಸಾಮಥ್ರ್ಯ ಸಾಧನೆ. 

	ಚೇತರಿಸಿಕೊಂಡ ವ್ಯಕ್ತಿಯಲ್ಲಿ ಮೊತ್ತ ಮೊದಲಾಗಿ ದೈಹಿಕ ನ್ಯೂನಾತಿರೇಕಗಳಿಂದ ದೌರ್ಬಲ್ಯ (ಡಿಸೆಬಿಲಿಟಿ) ಉಂಟಾಗಬಹುದು. ಆದ್ದರಿಂದ ಅಂಥ ನ್ಯೂನಾತಿರೇಕಗಳು ಉದ್ಭವಿಸದಂತೆ ಮುನ್ನೆಚ್ಚರಿಕೆಯನ್ನು ಮೊದಲಿಂದಲೇ ವಹಿಸಬೇಕು (ಉದಾಹರಣೆಗೆ ಕುಷ್ಠರೋಗದಲ್ಲಿ). ಹಾಗೂ ಊನತೆ ಕಂಡುಬಂದರೆ ಯುಕ್ತ ಚಿಕಿತ್ಸೆಗಳಿಂದ ಅದನ್ನು ಅದಷ್ಟು ಗುಣಪಡಿಸಬೇಕು. ಇನ್ನೂ ವಿಕಲತೆಯ ಶೇಷ ಉಳಿದಿದ್ದರೆ. ಅದರ ಮಿತಿಯೊಳಗೇ ದೈಹಿಕ ಹಾಗೂ ಔದ್ಯೋಗಿಕ ಸಾಮಥ್ರ್ಯ ದೊರೆಯುವಂತೆ ಕಲಿಸಿ ವ್ಯಕ್ತಿ ತನ್ನ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳಲು ಸಾಧ್ಯವಾಗುವಂತೆ ಮಾಡಬೇಕಾಗುತ್ತದೆ. ತಾನಾಗಿಯೇ ಓಡಾಡುವುದು ಇನ್ನೊಬ್ಬರ ನೆರವಿಗೆ ಕಾಯದೆ ರೈಲು, ಬಸ್ಸು ಗಾಡಿಗಳ ಮೂಲಕ ಪ್ರಯಾಣ ಮಾಡುವುದು, ಸ್ನಾನ ಶೌಚಗಳಿಗೆ ತಾನೇ ಗಮನಹರಿಸುವುದು, ಕೃತಕ ಕೈಕಾಲುಗಳನ್ನು ಅಳವಡಿಸಿದ್ದರೆ ಅದನ್ನು ತಾನೇ ತೆಗೆದುಹಾಕಿಕೊಳ್ಳುವುದು, ಹೇಳಿ ಇಲ್ಲವೆ ಬರೆದು ನೆರೆಯವರೊಡನೆ ಸಂಪರ್ಕ ಇಟ್ಟುಕೊಳ್ಳುವುದು ಇವು ವ್ಯಕ್ತಿ ಸಮಾಜದಲ್ಲಿ ಮರುಹೊಂದಾಣಿಕೆ ಪಡೆಯುವುದಕ್ಕೆ ಅಗತ್ಯ, ಅಷ್ಟೇನೂ ಗೋಜಿನವಲ್ಲದ ಈ ಕ್ರಮಗಳನ್ನು ರೂಢಿಸಿಕೊಳ್ಳುವಂತೆ ವ್ಯಕ್ತಿಗೆ ಕಲಿಕೆಮಾರ್ಗಗಳನ್ನು ಒದಗಿಸಿ ಕೊಡಬೇಕಾಗಿರುವುದಾದರೂ ಹಾಗೆ ಮಾಡದಿರುವುದೇ ಸಾಮಾನ್ಯ. ಹೀಗಾಗಿ ವ್ಯಕ್ತಿಗಳು ನಿಸ್ಸಹಾಯಕರಾಗಿಯೇ ಮುಂದುವರಿದು ಸಮಾಜಕ್ಕೆ ಭಾರವೆನಿಸುವಂತಾಗುತ್ತದೆ. ಮರುಕ್ರಿಯಾ ಸಾಮಥ್ರ್ಯಸಾಧನೆ ಅವಶ್ಯಕವಾಗುವ ಕೆಲವು ವಿಶೇಷ ಸಂದರ್ಭಗಳನ್ನು ಈ ಮುಂದೆ ವಿವರಿಸಿದೆ. 

	1. ದೇಹದ ಕೆಳಭಾಗದ ಲಕ್ವ (ಪ್ಯಾರಾಪ್ಲ್ಲೀಜಿಯ); ಇದರಲ್ಲಿ ಕಾಲುಗಳ ಸಂವೇದನಾನುಭವ ಹಾಗೂ ಸ್ವಾಧೀನ ತಪ್ಪಿಹೋಗಿರುತ್ತವೆ. ಮಿದುಳುಬಳ್ಳಿಯ ಅಂತ್ಯದ 1/3 ಭಾಗ ಅಪಘಾತ ಇತ್ಯಾದಿಗಳಿಂದ ನಿಷ್ಕ್ರಿಯೆಗೊಂಡಾಗ ಇಂಥ ಪರಿಸ್ಥಿತಿ ಕಂಡುಬರುತ್ತದೆ. ಸಾಧಾರಣವಾಗಿ ಇಂಥವರಲ್ಲಿ ಮೂತ್ರವಿಸರ್ಜನೆಯ ಹತೋಟಿಯೂ ತಪ್ಪಿರುವುದರಿಂದ ಮೂತ್ರಕೋಶರೋಗ ಉದ್ಭವಿಸುತ್ತದೆ. ಅಲ್ಲದೆ ಇವರು ಏಳಲಾರದೆ, ಹೊರಳಲಾರದೆ ಹಾಸಿಗೆಯಲ್ಲಿ ಬಿದ್ದಂತೆ ಬಿದ್ದಿರಬೇಕಾಗಿರುವುದರಿಂದ ಶಯನವ್ರಣವೂ (ಬೆಡ್‍ಸೋರ್) ತಲೆದೋರುತ್ತದೆ. ಇವೆರಡು ಕಾರಣಗಳಿಂದಲೂ ವ್ಯಕ್ತಿ ಅನತಿ ಕಾಲದಲ್ಲೇ ಮೃತನಾಗುತ್ತಾನೆ. ಒಂದನೆಯ ಮಹಾಯುದ್ಧಕಾಲದಲ್ಲಿ ಗಾಯಗೊಂಡು ಇಂಥ ಸ್ಥಿತಿಯಲ್ಲಿದ್ದ 400 ಜನ ಅಮೆರಿಕಯೋಧರಲ್ಲಿ 20ವರ್ಷಗಳ ಅನಂತರ ಕೇವಲ ಇಬ್ಬರು ಬದುಕಿದ್ದರೆಂದು ತಿಳಿದಿದೆ. ಅದರೆ ಸುಮಾರು 1940ರ ಹೊತ್ತಿಗೆ ಮರುಕ್ರಿಯಾಸಾಮಥ್ರ್ಯಸಾಧನೆಯ ಕ್ರಮಗಳನ್ನು ಆಚರಣೆಗೆ ತಂದುದರಿಂದ ಎರಡನೇ ಮಹಾಯುದ್ಧದಲ್ಲಿ ಅಂಥವೇ ಗಾಯಾಳುಗಳ ಪೈಕಿ 10 ವರ್ಷಗಳ ತರುವಾಯವೂ 80% ಮಂದಿ ಬದುಕಿದ್ದರೆಂದು ವ್ಯಕ್ತಪಟ್ಟಿದೆ. ರಸ್ತೆ ಅಪಘಾತ, ಮರದಿಂದ ಇಲ್ಲವೆ ಮನೆಮೇಲಿಂದ ಕೆಳಕ್ಕೆ ಬೀಳುವುದು, ಬೆನ್ನು ಮೂಳೆಯ ಕ್ಷಯ ಮತ್ತು ಇನ್ನೂ ಇತರರೋಗಗಳಲ್ಲಿ ಇಂಥದೇ ದುಃಸ್ಥಿತಿ ಉಂಟಾಗುವುದರಿಂದ ಅಂಥ ನಿಸ್ಸಹಾಯಕ ದುರ್ಬಲಗಳಿಗೆ (ಹೆಲ್ಪ್‍ಲೆಸ್) ಮರುಕ್ರಿಯಾಸಾಮಥ್ರ್ಯ ಸಾಧನೆ ಅವಶ್ಯಕ ಎನ್ನುವುದು ವ್ಯಕ್ತ. 

	2. ಪಾಶ್ರ್ವವಾಯು ಅಥವಾ ಲಕ್ವ (ಹೆಮಿಪ್ಲೀಜಿಯ); ತಲೆಗೆ ಏಟುಬೀಳುವುದು, ಮಿದುಳಿನ ಅಪಧಮನಿಗಳ ಪೆಡಸಣಿ (ಸೆರಿಬ್ರಲ್ ಆರ್ಟೀರಿಯೊಸ್ಕ್ಲೀರೋಸಿಸ್), ರಕ್ತಸ್ರಾವವಾಗುವುದು ಇಲ್ಲವೇ ಅಲ್ಲಿಯ ಅಪಧಮನಿಗಳಲ್ಲಿ ರಕ್ತಗರಣೆಕಟ್ಟಿ ರಕ್ತಪೂರೈಕೆಗೆ ಆಡಚಣೆ ಆಗುವುದು. ಹಾಗಾದಾಗ ದೇಹದ ಒಂದು ಪಾಶ್ರ್ವದಲ್ಲಿ ಚಲನೆಗಳ ಸ್ವಾಧೀನ ತಪ್ಪಿಹೋಗುತ್ತದಲ್ಲದೆ. ಆ ಭಾಗಗಳಲ್ಲಿ ಸಂವೇದನಾನುಭವಗಳೂ ನಾಶವಾಗಿರುತ್ತವೆ. ಕೆಲವರಿಗೆ ಮಾತಾಡಲೂ ಸಾಧ್ಯವಾಗುವುದಿಲ್ಲ. ಇಂಥವರಿಗೆ ಕೈಕಾಲು ಆಡಿಸಲು ಮತ್ತು ಮಾತು ಕಲಿಸಲು ಆದಷ್ಟು ಬೇಗ ಪ್ರಾರಂಭಿಸಬೇಕು. ಈ ಪುನಃ ಕ್ರಿಯಾಸಾಧನೆಯನ್ನು ಮೊದಮೊದಲು ಬಲವಂತದಿಂದ ಜರಗಿಸುತ್ತ ಶೀಘ್ರದಲ್ಲಿ ವ್ಯಕ್ತಿ ಆದಷ್ಟು ಮಟ್ಟಿಗೆ ನಿರಂತರವಾಗಿ ಆದರೆ ಹೆಚ್ಚು ಶ್ರಮವಿಲ್ಲದಂತೆ ತಾನೇ ಮುಂದುವರಿಸುತ್ತ ಚಲನೆಯನ್ನು ಮತ್ತೆ ಕಲಿಯುವಂತೆ ಮಾಡಬೇಕು. ಹಿಡಿದುಕೊಳ್ಳವುದು, ನಿಲ್ಲುವುದು, ನಡೆದಾಡುವುದು ಇತ್ಯಾದಿಗಳನ್ನು ಸ್ವತಂತ್ರ ಪ್ರಯತ್ನದಿಂದ ಜರುಗಿಸುತ್ತಿದ್ದರೆ ಮರುಕ್ರಿಯಾಸಾಮಥ್ರ್ಯವನ್ನು ಬಲುಬೇಗನೆ ಪಡೆಯಬಹುದು.

	3. ಈ ರೀತಿ ಮರುಕ್ರಿಯಾಚಾಲನೆಯನ್ನು ವಿಧಿವತ್ತಾಗಿ ಬಳಸಿಕೊಂಡ ಮರುತ್ತನಿಗೆ ನರಿಷ್ಯಂತ ಮುಂತಾದ ಹದಿನೆಂಟು ಮಂದಿ ಮಕ್ಕಳು. ಈ ವೃತ್ತಾಂತ ಭಾಗವತ, ರಾಮಾಯಣ, ಮಾರ್ಕಂಡೇಯ ಪುರಾಣಗಳಲ್ಲಿ ಬಂದಿದೆ. 
(ಬಿ.ಎನ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ